ಕಾನ ಶಂಕರನಾರಾಯಣ ದೇವರ ಮಠ , ಕಾನ ಧೂಮಾವತಿ ದೈವಸ್ಥಾನ ,ಕಾನ ಪೂಮಾಣಿ ಕಿನ್ನಿಮಾಣಿ ಕಟ್ಟೆ,ನಾಯ್ಕಪಿನಲ್ಲಿರುವ ಕಾನ ವನ ಶಾಸ್ತಾವು ಕಾನ ಗ್ರಾಮದ ಹನ್ನೆರಡು ಮನೆಯವರು ಆರಾಧಿಸಿಕೊಂಡು ಬಂದಿರುವ ಆರಾಧನಾ ಕ್ಷೇತ್ರಗಳು .ಪೂರ್ವಿಕರ ಕಾಲದಲ್ಲಿ ಆರಾಧನೆ ಪ್ರಾರಂಭಿಸಿದ ಹನ್ನೆರಡು ಮನೆಗಳು ಈ ಕೆಳಗೆ ಹೇಳಲ್ಪಡುವ ಮನೆಗಳಾಗಿವೆ .ಹಿಳ್ಳೆಮನೆ ,ಕಿಟ್ಟಜ್ಜನ ಮನೆ ( ಹರಿಯಪ್ಪನ ಮನೆ ) ಪೊಟ್ಟನ ಮನೆ , ಕಟ್ಟಂಪಾಡಿ ( ಹಿತ್ತಿಲ ಮನೆ) , ನಾಣಿತ್ತಿಲು , ಕೋಣಮ್ಮೆ ( ಪುರೋಹಿತರ ಮನೆ ) ಶೇಡಿಗುಮ್ಮೆ ,ಕಬೆಕ್ಕೋಡು, ಮೇಣ ,ಮೇಲಣ ಮೇಣ , ಬೋನಂತಾಯ , ಪೊಸವಣಿಕೆ . ಕಾಲಕ್ರಮೇಣ ೧೮೬೦ ರ ಕಾಲಘಟ್ಟದಲ್ಲಿ ಪೊಟ್ಟನ ಮನೆಯು ಕಾನ ಗ್ರಾಮದಲ್ಲಿ ನಿರ್ವಂಶವಾಯಿತು ( ಎಡನಾಡಿನಲ್ಲಿರುವ ಮರಿಮನೆ ಕುಟುಂಬದವರು ಈ ಮನೆತನದವರಾಗಿದ್ದಾರೆ . ಈ ಹನ್ನೆರಡು ಮನೆಗಳಲ್ಲದೆ ಕಣ್ಣೂರು ಬೆಣ್ಣೆಮನೆಯವರೂ ಅನಾದಿ ಕಾಲದಿಂದಲೂ ಆರಾಧಿಸಿಕ್ಫಂಡು ಬರುತ್ತಿದ್ದಾರೆ....